ಮೇ ೨೦ - ಮೇ ತಿಂಗಳ ಇಪ್ಪತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೪೦ನೇ (ಅಧಿಕ ವರ್ಷದಲ್ಲಿ ೧೪೧ನೇ) ದಿನ. ಮೇ ೨೦೨೪ == ಪ್ರಮುಖ ಘಟನೆಗಳು == ೫೨೬ - ಸಿರಿಯ ಮತ್ತು ಆಂಟಿಯೊಕಿಯಗಳಲ್ಲಿ ಸಂಭವಿಸಿದ ಭೂಕಂಪ ಅಂದಾಜಿತ ೩೦೦,೦೦೦ ಜನರ ಮರಣಕ್ಕೆ ಕಾರಣವಾಯಿತು. ೧೪೯೮ - ವಾಸ್ಕೊ ಡ ಗಾಮ ಕೇರಳದ ಕೋರಿಕೊಡೆಯನ್ನು ತಲುಪಿದನು. ೧೯೦೨ - ಕ್ಯೂಬ ಅಮೇರಿಕ ಸಂಯುಕ್ತ ಸಂಸ್ಥಾನದಿಂದ ಸ್ವಾತಂತ್ರ್ಯ ಪಡೆಯಿತು. ೧೯೮೩ - ಏಡ್ಸ್ ಕಾಯಿಲೆಯ ಕಾರಣೀಭೂತ ವೀರ್ಯಾಣು ಎಚ್‍ಐವಿಯ ಪತ್ತೆ. ೨೦೦೨ - ಪೂರ್ವ ಟೀಮೊರ್ ಇಂಡೊನೇಷ್ಯಾದಿಂದ ಸ್ವಾತಂತ್ರ್ಯ ಪಡೆಯಿತು. ೨೦೧೧ - ಪಶ್ಚಿಮ ಬಂಗಾಳದಲ್ಲಿ ೩೪ ವರ್ಷಗಳ ಎಡರಂಗದ ಆಡಳಿತವನ್ನು ಅಂತ್ಯಗೊಳಿಸಿರುವ ತೃಣಮೂಲ ಕಂಗ್ರೆಸ್ ಅಧ್ಯಕ್ಷೆ, ಮಮತಾ ಬ್ಯಾನರ್ಜಿಯವರು ರಾಜ್ಯದ 'ಪ್ರಪ್ರಥಮ ಮಹಿಳಾ ಮುಖ್ಯಮಂತ್ರಿ'ಯಾಗಿ ಇಂದು, ಶುಕ್ರವಾರ, ಸರಿಯಾಗಿ, ಮಧ್ಯಾನ್ಯ ೧ ಗಂಟೆ, ೧ ನಿಮಿಷಕ್ಕೆ, ಪದಗ್ರಹಣ ಮಾಡಿದರು. == ಜನನ == ೧೩೯೯ - ಸಂತ ಕಬೀರ್. ೧೭೫೦ - ಮೈಸೂರಿನ ಹುಲಿ ಟಿಪ್ಪು ಸುಲ್ತಾನ್. ೧೯೬೪ - ಭಾರತದ ಅಥ್ಲೀಟ್ ಪಿ.ಟಿ.ಉಷಾ. == ನಿಧನ == ೨೦೦೨ - ಸ್ಟೀಫನ್ ಜೇ ಗೂಲ್ಡ್, ಅಮೇರಿಕ ದೇಶದ ಪುರಾತನಜೀವಿಶಾಸ್ತ್ರಜ್ಞ. == ಹಬ್ಬಗಳು/ಆಚರಣೆಗಳು == ಕ್ಯಾಮೆರೂನ್ - ರಾಷ್ಟ್ರೀಯ ದಿನಾಚರಣೆ. ಪೂರ್ವ ಟೀಮೊರ್ - ರಾಷ್ಟ್ರೀಯ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ